ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ

0

ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ.

IMG 20250416 WA0004 1024x517

ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು ಕಣಿ ಪಂಚಾಂಗ ಶ್ರವಣ ಕಾರ್ಯಕ್ರಮ ಕದ್ರಿ ಕಂಬಳ ರಸ್ತೆಯ ಮಂಜುಪ್ರಾಸಾದ ನಿಲಯದ ವಾದಿರಾಜ ಮಂಟಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ವೇ। ಮೂ। ಡಾ। ಪ್ರಭಾಕರ ಅಡಿಗ ಅವರ ಮಾರ್ಗದರ್ಶನದಲ್ಲಿ ಜರಗಿತು. ರುದ್ರ ಪಾರಾಯಣ ಬಳಗ, ಶ್ರೀಮತಿ ಪೂರ್ಣಿಮಾ ರಾವ್ ಪೇಜಾವರ ಮತ್ತು ಶ್ರೀಮತಿ ಶಶಿಪ್ರಭಾ ಐತಾಳ್ ಇವರ ಆಯೋಜಕತ್ವದಲ್ಲಿ ಭಜನೆ ಜರಗಿತು. ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ರಾಜ್ಯ ಧಾರ್ಮಿಕ ಪರಿಷತ್ ಮೂಲಕ ನೇಮಕ ಗೊಂಡ ರಾಜೇಂದ್ರ ಚಿಲಿಂಬಿಯವರನ್ನು ಅಭಿನಂದಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ. ಎಸ್. ಪ್ರದೀಪ ಕುಮಾರ ಕಲ್ಕೂರ, ಪ್ರಭಾಕರ್ ರಾವ್ ಪೇಜಾವರ, ಸುಧಾಕರ್ ರಾವ್ ಪೇಜಾವರ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *