08/08/2026

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್

1
Screenshot

Screenshot


ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ ಎಂಬುದಕ್ಕೆ ಕತಾರ್ ಬಿಲ್ಲವಸ್ ಅಜಂತ ಸಾಕ್ಷಿ. 2012 ರಲ್ಲಿ ಆರಂಭಗೊಂಡ ಈ ಬಿಲ್ಲವ ಸಮಾಜದ ಸಂಘಕ್ಕೆ ನೂತನ ಮಹಿಳಾ ಅಧ್ಯಕ್ಷೆಯಾಗಿ ಮೊಟ್ಟಮೊದಲ ಬಾರಿಗೆ ಅಪರ್ಣ ಶರತ್ ರವರನ್ನು ಸಂಘದ ಸದಸ್ಯರು ಸರ್ವಾನುಮತದಿಂದ ಆಯ್ಕೆಮಾಡಿದ್ದಾರೆ.

ಅಪರ್ಣ ರವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ನವರಾಗಿದ್ದು, ಮಾನವ ಸಂಪನ್ಮೂಲ ವಿಷಯದಲ್ಲಿ ಎಂಬಿಎ ಪದವಿಯನ್ನು ಪಡೆದು, ಕತಾರ್‌ನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜ‌ರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ ತಿಂಗಳು 26ರಂದು ICC ಕತಾರ್‌ನಲ್ಲಿ ನಡೆದ ಸಂಘದ ಸಲಹಾ ಸಮಿತಿಯ ಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ನಡೆದಿದ್ದು, ಮುಂದಿನ ಅವಧಿಯಲ್ಲಿ ಈ ಸಮಿತಿಯು ಕಾರ್ಯ ನಿರ್ವಹಿಸಲಿದೆ. ಶ್ರೀಮತಿ ಅಪರ್ಣ ಶರತ್ ರವರಿಗೆ, ನಿಮ್ಮ ಕಾರ್ಯಾವಧಿಯಲ್ಲಿ ಬಿಲ್ಲವಸ್ ಕತಾ‌ರ್ ಇನ್ನಷ್ಟು ಉತ್ತುಂಗಕ್ಕೆ ಸೇರಲಿ ಎಂದು ಹಾರೈಸುವೆವು.

ಪದಾಧಿಕಾರಿಗಳು ಹಾಗೂ ಸದಸ್ಯರು

ಬಿಲ್ಲವ ಕತಾರ್


1 thought on “ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್

Leave a Reply

Your email address will not be published. Required fields are marked *

You may have missed