08/08/2026

ಯುವವಾಹಿನಿ ಕೇಂದ್ರ ಸಮಿತಿಯ ಎರಡನೆಯ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಪಡ್ಪು ಆಯ್ಕೆ

0
IMG_4564

ಮಂಗಳೂರು:- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ  ಮಂಗಳೂರು ಇದರ ಎರಡನೆಯ ಉಪಾಧ್ಯಕ್ಷರಾಗಿ ಉಪ್ಪಿನಂಗಡಿಯ ಅಶೋಕ್ ಕುಮಾರ್ ಪಡ್ಪು ಆಯ್ಕೆಯಾಗಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಹಾಗೂ ರಾಜಧಾನಿ ಬೆಂಗಳೂರು ಸೇರಿದಂತೆ 34 ಘಟಕಗಳನ್ನು ಒಳಗೊಂಡಿರುವ ಯುವವಾಹಿನಿ ಸಂಸ್ಥೆಗೆ ಪ್ರತಿ ವರ್ಷ ನಡೆಯುವ. ಎರಡನೆಯ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಚುಣಾಯಿತರಾಗಿರುತ್ತಾರೆ

ಪುತ್ತೂರು ಬಿಲ್ಲವ ಸಂಘದ ಉಪಾಧ್ಯಕ್ಷರಾಗಿ, ಬಿಲ್ಲವ ಗ್ರಾಮ ಸಮಿತಿಯ ಉಪ್ಪಿನಂಗಡಿ ವಲಯ ಸಂಚಾಲಕರಾಗಿ ಹಾಗೂ  ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.

ದಿನಾಂಕ 03.12.2023ರಂದು ನಡೆದ ಚುಣಾವಣಾ ಪ್ರಕ್ರಿಯೆಯನ್ನು ಕೇಂದ್ರ ಸಮಿತಿಯ ಚುಣಾವಣಾಧಿಕಾರಿ ಉದಯ್ ಅಮೀನ್ ಮಟ್ಟು ನೆರವೇರಿಸಿದರು. ಇವರಿಗೆ ಪುತ್ತೂರು ಬಿಲ್ಲವ ಸಂಘದ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ ತಮ್ಮ ಉಪಾಧ್ಯಕ್ಷ ಅವಧಿಯಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಯುವವಾಹಿನಿ‌ ಸಂಸ್ಥೆಯು ಇನ್ನಷ್ಟೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೆವೆ

ಅಧ್ಯಕ್ಷರು / ಕಾರ್ಯದರ್ಶಿ

ಬಿಲ್ಲವ ಸಂಘ (  ರಿ  ). ಪುತ್ತೂರು


Leave a Reply

Your email address will not be published. Required fields are marked *

You may have missed