ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ

0

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ

ತೊಂಭತ್ತರ ದಶಕದಿಂದ ಸನ್ಮಾನ್ಯ ಜನಾರ್ದನ ಪೂಜಾರಿಯವರು ತನ್ನ ಅಪೂರ್ವ ಇಚ್ಛಾಶಕ್ತಿಯಿಂದ ಚಿಕ್ಕ ದೇವಸ್ಥಾನವಾಗಿದ್ದ ಶೀಗೋಕರ್ಣನಾಥ ಕ್ಷೇತ್ರವನ್ನು ಅಭೂತಪೂರ್ವವಾಗಿ ನವೀಕರಿಸಿ, ಇಡೀ ವಿಶ್ವದ ಗಮನವನ್ನು ಶ್ರೀಕ್ಷೇತ್ರದತ್ತ ಸೆಳೆಯುವಂತೆ ಅಭಿವೃದ್ಧಿ ಪಡಿಸಿದರು.ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕರೂ ರಾಷ್ಟ್ರ ಮಟ್ಟದ ರಾಜಕೀಯ ಮತ್ಸದ್ಧಿಯೂ ಆಗಿರುವ  ಶ್ರೀ ಬಿ ಜನಾರ್ದನ ಪೂಜಾರಿ ಯವರಿಗೆ ಬಹುಶಃ  ಶ್ರೀ ನಾರಾಯಣ ಗುರುಗಳೇ ನೀಡಿದ ಪ್ರೇರಣೆಯೋ ಶ್ರೀ ಗೋಕರ್ಣನಾಥನ ಇಚ್ಛೆಯೋ?  ಅಥವಾ ಹಿಂದುಳಿದ ವರ್ಗದ ಸಮಸ್ತ ಜನತೆಯ ಆಶೋತ್ತರವೋ ಎಂಬಂತೆ ಇಚ್ಛಾಶಕ್ತಿಯೊಂದು ಹೃದಯಾಂತರಾಳದಿಂದ ಮೂಡಿ ಸಾಕಾರ ಗೊಂಡಿತು. ಈ ಕ್ಷೇತ್ರವನ್ನು ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ಸಾಮಾಜಿಕ ಸುಧಾರಣಾ ಕೇಂದ್ರವಾಗಿ ಜಾತ್ಯಾತೀತ ಕ್ಷೇತ್ರವಾಗಿ ನವನಿರ್ಮಾಣ ಮಾಡಲು ಪೂಜಾರಿಯವರು ಸಂಕಲ್ಪ ಮಾಡಿದರು.0cb7ed7e Cfa8 419e Ad5e B5b7a91e6143 838x1024

ಇಂದು ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಸನ್ನಿಧಾನವು ದೇವಲೋಕವೇ ಧರೆಗಿಳಿದಂತೆ ಸೌಂದರ್ಯವನ್ನು ತುಂಬಿಕೊಂಡು, ಭಕ್ತರ ಹೃದಯದಲ್ಲಿ ಭಕ್ತಿಯ ಆಲೆಯನ್ನು ಸೃಷ್ಟಿಸಿ, ಭಕ್ತರು, ಜಿಜ್ಞಾಸುಗಳು ಪ್ರವಾಸಿಗರು ಸೇರಿದಂತೆ ಕೋಟ್ಯಾಂತರ ಮಂದಿಯನ್ನು ಆಕರ್ಷಿಸುತ್ತಿದೆಯೆಂದರೆ, ಅದರ ಹಿಂದಿರುವ ಅಗಾಧ ಸಂಕಲ್ಪ ಶಕ್ತಿ, ಚೇತನ ಶಕ್ತಿ ಸನ್ಮಾನ್ಯ ಜನಾರ್ದನ ಪೂಜಾರಿಯೆಂದರೆ ಅತಿಶಯೋಕ್ತಿಯಲ್ಲ. ಸುಮಾರು 34 ವರ್ಷಗಳ ಹಿಂದೆ ಶ್ರೀಕ್ಷೇತ್ರದ ನವೀಕರಣಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಢೀಕರಿಸಿ ಕೇವಲ ಅಲ್ಪ ಅವಧಿಯಲ್ಲೇ ನವೀಕರಣದ ಕೆಲಸ ಕಾರ್ಯ ಮುಗಿಯುವಂತೆ ನೋಡಿಕೊಂಡು, 1991 ರಲ್ಲಿ ನವೀಕರಣಗೊಂಡು ಪವಾಡಸದೃಶವಾಗಿ ಶ್ರೀಕ್ಷೇತ್ರ ಕಂಗೊಳಿಸುವಂತೆ ಮಾಡಿದ ಸನ್ಮಾನ್ಯ ಜನಾರ್ದನ ಪೂಜಾರಿಯವರ ಅವಿರತ ಪರಿಶ್ರಮ, ಸಮಗ್ರ ಚಿಂತನೆ, ಅದಕ್ಕೆ ಬೇಕಾದ ಯೋಜನೆಯನ್ನು ರೂಪಿಸಿದ ಪರಿ ಭಕ್ತರನ್ನು ವಿಸ್ಮಯಗೊಳಿಸಿದೆ. ಕ್ಷೇತ್ರ ದಿನಗಳೆದಂತೆ ಭಕ್ತ ಸಮೂಹವನ್ನು ದೇಶ ವಿದೇಶಗಳಿಂದ ತನ್ನೆಡೆಗೆ ಆಕರ್ಷಿಸತೊಡಗಿದ್ದು ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.   ನವರಾತ್ರಿ ಸಂದರ್ಭದ ದಸರಾ ಮಹೋತ್ಸವವು ಇಂದು ಮಂಗಳೂರು ದಸರಾವೆಂದು ಜಗದ್ವಿಖ್ಯಾತವಾಗಿದೆ.

✍️ರಾಜೇಂದ್ರ ಚಿಲಿಂಬಿ


Leave a Reply

Your email address will not be published. Required fields are marked *