ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರ ಸುವರ್ಣರು

0

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರಸುವರ್ಣರು

ಜೀವನದಲ್ಲಿ ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭ ಮತ್ತು ಯಶಸ್ಸು ಖಂಡಿತಾ ಸಾಧ್ಯ ಎಂಬುದನ್ನುಸಾಧಿಸಿ ತೋರಿಸಿದವರು ಶೈಲೇಂದ್ರ ವೈ. ಸುವರ್ಣರIMG 3178ಬಡತನದ ಕುಟುಂಬದಲ್ಲಿ ಬೆಳೆದರೂ ಬಡತನ ಶಾಪವಲ್ಲ, ಕಠಿಣ ಪರಿಶ್ರಮದಿಂದ ಉನ್ನತಮಟ್ಟಕ್ಕೇರಬಹುದು ಎಂಬುದನ್ನು ಸಾಧಿಸಿಇತರರಿಗೆ ಮಾದರಿಯಾಗಿ ಬೆಳೆದವರು ಸುವರ್ಣರವರು.

ಹೌದು ಎಸ್ಆರ್‌ಆರ್ ಮಸಾಲೆ ಎನ್ನುವ ಮಸಾಲೆ ಪದಾರ್ಥಗಳ ಇಂಡಸ್ಟ್ರಿ ಸ್ಥಾಪಿಸಿ ಪ್ರತಿಷ್ಠಿತ ಉದ್ಯಮಗಳ ಸಾಲಿನಲ್ಲಿ ಬೆಳೆದ ಇವರಸಾಧನೆ ಖಂಡಿತವಾಗಿಯೂ ಅನುಕರಣೀಯ.

ಇದೀಗ ಭಾರತದ ಪ್ರತಿಷ್ಠಿತ ನಿಯತಕಾಲಿಕೆ ಔಟ್‌ಲುಕ್‌ನಲ್ಲಿ ಅವರ ಇಂಡಸ್ಟ್ರಿ ಬೆಳವಣಿಗೆ ಬಗ್ಗೆ ಮುಖಪುಟದಲ್ಲಿ ಲೇಖನಪ್ರಕಟವಾಗಬೇಕಾದರೆ ಅವರ ಸಾಧನೆ ಏನು ಎಂಬುದನ್ನು ನಾವು ಮನಗಾಣಬೇಕು.Ada64cb3 0485 4c70 89eb 1568d2470e0b

ಕೇವಲ ಉದ್ದಿಮೆ ಮಾತ್ರವಲ್ಲದೇ, ಸಮಾಜಮುಖಿ ಕಾರ್ಯದಲ್ಲಿ ತೊಡಿಸಿಕೊಳ್ಳುತ್ತ, ತನ್ನ ಉದ್ಯಮದ ಒಂದಷ್ಟು ಪಾಲನ್ನುಸಮಾಜದ ಅಶಕ್ತರು, ಬಡವರು, ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಸಮಾಸೇವೆ ಜತೆಗೆ ಅನೇಕ ಸಮಾಜಮುಖಿ ಕಾರ್ಯಮಾಡುವ ಸಂಘಟನೆಗಳೊಂದಿಗೆ ಸಕ್ರಿಯರಾಗಿತೊಡಗಿಸಿಕೊಂಡು, ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿರುವ ಇವರುನಿಜವಾಗಿಯೂ ಎಲ್ಲರಿಗೂ ಮಾದರಿ.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವದಂತೆ ಜೀವನ ರೂಪಿಸಿಕೊಂಡು, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರವ್ಯಕ್ತಿತವನ್ನು ಅಳವಡಿಸಿಕೊಂಡು, ಸಮಾಜದ ಹಿರಿಯರು ಮತ್ತು ಕಿರಿಯರೊಂದಿಗೆ ಆತ್ಮೀಯರಾಗಿದ್ದುಕೊಂಡು ಸ್ನೇಹಜೀವಿಎನಿಸಿಕೊಂಡವರು.

ಇವರ ಉದ್ದಿಮೆ ಇನ್ನಷ್ಟು ಉನ್ನತಮಟ್ಟಕ್ಕೇರಿ ಮತ್ತಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗುವಂತೆ ದೇವರು ಅನುಗ್ರಹ ಕರುಣಿಸಲಿಎಂದು ಆಶಿಸೋಣ.

ಪದ್ಮರಾಜ್ ಆರ್.

ಕೋಶಾಧಿಕಾರಿ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ

ಅಧ್ಯಕ್ಷರು ಗುರುಬೆಳದಿಂಗಳು ಫೌಂಡೇಶನ್

ನೋಟರಿ ಮತ್ತು ನ್ಯಾಯವಾದಿಗಳು ಮಂಗಳೂರು


Leave a Reply

Your email address will not be published. Required fields are marked *