ಬಿರುವೆರ್ ಕುಡ್ಲ ಬಜಪೆ ಘಟಕ ದ ಮಹಾಸೇವಾ ಯೋಜನೆಯ ಅಡಿಯಲ್ಲಿ ಸುಸಜ್ಜಿತ ಮನೆ ನಿರ್ಮಾಣದ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮ

0

ಬಿರುವೆರ್ ಕುಡ್ಲ ಬಜಪೆ ಘಟಕ ಮಹಾಸೇವಾ ಯೋಜನೆಯ ಅಡಿಯಲ್ಲಿ ಸುಸಜ್ಜಿತ ಮನೆ ನಿರ್ಮಾಣದ ಉದ್ಘಾಟನೆ ಹಾಗೂಹಸ್ತಾಂತರ ಕಾರ್ಯಕ್ರಮ ದಿನಾಂಕ 25.6.2023ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ನೆರವೇರಿತು.IMG 1100 E1687705244902
  ಬಜಪೆ ಸಮೀಪದ ಮುಂಡಬೆಟ್ಟು, ಮೂಡುಪೆರಾರ ನಿವಾಸಿ ದಯಾನಂದ ಬಂಗೇರ ಮತ್ತು ಅವರ ಮೂರು ಮಕ್ಕಳು, ಒಂದುಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಇವರ ಕುಟುಂಬವು ಕಡು ಬಡತನದಲ್ಲಿ ಜೀವನ ಸಾಗುತ್ತಿದ್ದರು. ಇವರಿಗೆ ವಾಸಿಸಲುಯೋಗ್ಯವಾದ ಮನೆ ಇರಲಿಲ್ಲ ಒಂದು ಗುಡಿಸಿಲಿನಲ್ಲಿ ವಾಸಿಸುತ್ತಿದ್ದು, ತನ್ನ ಕಷ್ಟವನ್ನು ತಾಳಲಾರದೆ ಇವರು ಬಿರುವೆರ್ ಕುಡ್ಲ ಬಜಪೆಘಟಕಕ್ಕೆ ಮನವಿಯನ್ನು ನೀಡಿರುತ್ತಾರೆ. ಇದನ್ನು ಗಮನಿಸಿದ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇವರಿಗೆ ಮನೆನಿರ್ಮಿಸಿ ಕೊಡುವ ಭರವಸೆಯನ್ನು ನೀಡಿ ತಕ್ಷಣವೇ ಮನೆ ನಿರ್ಮಾಣದ ಕೆಲಸವನ್ನು ಆರಂಭಿಸಿ ಕೆಲವೇ ದಿನಗಳಲ್ಲಿ ಬಿರುವೆರ್ ಕುಡ್ಲಬಜಪೆ ಘಟಕದ ಮಹಾ ಸೇವಾ ಯೋಜನೆಯ ಅಡಿಯಲ್ಲಿ ಸುಸಜ್ಜಿತವಾದ ಸುಮರು 12 ಲಕ್ಷ ವೆಚ್ಚದ ಮನೆಯನ್ನು ನಿರ್ಮಿಸಿಕೊಟ್ಟಿದೆ. ಇದು ಅನೇಕ ದಾನಿಗಳ ಸಹಕಾರದಿಂದ ಮನೆ ನಿರ್ಮಾಣದ ಮಹಾ ಸೇವಾ ಯೋಜನೆ ಅತಿ ಯಶಸ್ವಿಯಾಗಿ ನೆರವೇರಿದೆಎಂದು ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕುಮಾರ್ ಕೆಂಜಾರು ಕಾನ ಹೇಳಿದ್ದಾರೆ.IMG 1099 E1687705299490

  ಮನೆಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕುದ್ರೋಳಿಯ ಅಧ್ಯಕ್ಷರಾದ ಶ್ರೀ ಸಾಯಿ ರಾಮ್ ರವರು ನೆರವೇರಿಸಿದ್ದು,  ಮನೆಯಹಸ್ತಾಂತರವನ್ನು ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯದ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸದರು ಶ್ರೀ ನಳಿನ್ಕುಮಾರ್ ಕಟೀಲು ರವರು ದಯಾನಂದ ಬಂಗೇರರವರ ಕುಟುಂಬಕ್ಕೆ ಮನೆಯನ್ನು ಹಸ್ತಾಂತರಿಸಿದರು. ಗುರುಪುರದ ವಜ್ರದೇಹಿಮಠದ ಶ್ರೀ ಶ್ರೀ ಶ್ರೀ ರಾಜಶೇಖರನಂದ ಸ್ವಾಮೀಜಿಗಳು ಬಿರುವೆರ್ ಕುಡ್ಲ ಸಂಘಟನೆಯ ಸಾಧನೆಯನ್ನು ಹಾಗೂ ಶ್ರದ್ಧೆಯನ್ನು ಮೆಚ್ಚಿ , ಕೊಂಡಾಡಿ ಘಟಕದ ಎಲ್ಲಾ ಸದಸ್ಯರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸಂಸದರಾದ ನಳಿನ್ ಕುಮಾರ್ ಕಟೀಲು ಮಾತನಾಡಿಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಸಮಾಜಮುಖಿ ಸೇವೆ ನಾನು ಕಳೆದ ಆರು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ನನ್ನಆತ್ಮೀಯ ಮಿತ್ರರಾದ ಉದಯ ಪೂಜಾರಿ ರವರ ನೇತೃತ್ವದಲ್ಲಿ ಅತಿ ಯಶಸ್ವಿಯಾಗಿ ಸಂಘಟನೆ ಸಮಾಜದ ಕಾಳಜಿ, ಅಶಕ್ತರ ಪಾಲಿಗೆದಾರಿದೀಪವಾಗಿ ಸಮಾಜದ ಜೊತೆ ಸಾಗುತ್ತಿದೆ ಎಂದರು. ಶ್ರೀ ಕ್ಷೇತ್ರ ಕುದ್ರೋಳಿಯ ಅಧ್ಯಕ್ಷರಾದ ಸಾಯಿ ರಾಮ್ ರವರು ಘಟಕಕ್ಕೆಶುಭ ಕೋರಿದರು.  ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿಯವರು ಬಿರುವೆರ್ ಕುಡ್ಲ  ಸಂಘಟನೆ ಮತ್ತು IMG 1091 1024x768ತಮ್ಮಆತ್ಮೀಯತೆಯನ್ನು ಬಣ್ಣಿಸಿದರು. ಹಾಗೂ ಸಂಘಟನೆಯ ಕಾರ್ಯವೈಕರಿಗೆ ಶುಭ ಹಾರೈಸಿದರು. ಮಂಗಳೂರು ದಕ್ಷಿಣ ಕ್ಷೇತ್ರದಶಾಸಕರಾದ ಶ್ರೀ ವೇದವ್ಯಾಸ ಕಾಮತ್ ರವರು ಮಾತನಾಡಿ ಬಿರುವೆರ್ ಕುಡ್ಲ ಬಜಪೆ ಘಟಕವು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಆಧಾರಿತವಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಸೇರಿಸಿಕೊಂಡು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಸಮಾಜದದಾರಿದೀಪವಾಗಿದೆ ಎಂದರು.D9d12d5d 4011 4197 B4f0 C05887500cfc 1024x768

ಸಂದರ್ಭದಲ್ಲಿ ಮನೆ ನಿರ್ಮಾಣದ ಕಾರ್ಯಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮುಲ್ಕಿಮೂಡಬಿದ್ರೆ ಕ್ಷೇತ್ರದ ಶಾಸಕರಾದ ಶ್ರೀ ಉಮನಾಥ ಕೋಟ್ಯಾನ್, ಶ್ರೀ ಕ್ಷೇತ್ರ ಕುದ್ರೋಳಿ ಇದರ ಉಪಾಧ್ಯಕ್ಷರಾದ ಶ್ರೀ ಊರ್ಮಿಳರಮೇಶ್ ಕುಮಾರ್, ಶ್ರೀ ಕಟೀಲ್ ಕನ್ಸ್ಟ್ರಕ್ಷನ್ ಶ್ರೀ ಶಿವರಾಮ ಕೋಟ್ಯಾನ್, ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯಪೂಜಾರಿ ಬಳ್ಳಾಲ್ ಬಾಗ್, ಉದ್ಯಮಿ ಶ್ರೀ ವಿವೇಕ್ ರಾಜ್ ಪೂಜಾರಿ, ಶ್ರೀ ಚಂದ್ರಶೇಖರ್ ಎಂ ಅಮಿನ್ ವಕೀಲರು , ಘಟಕದಅಧ್ಯಕ್ಷರಾದ ಶ್ರೀ ಪ್ರಶಾಂತ್ ಕುಮಾರ್ ಕೆಂಜಾರು ಕಾನ, ಪಡುಪೆರಾರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅಮಿತಾಶೆಟ್ಟಿ ಹಾಗೂಆನೇಕ ಗಣ್ಯಾಧಿಗಣ್ಯರು ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.


Leave a Reply

Your email address will not be published. Required fields are marked *