08/08/2026

ದಿ ಬೆಸ್ಟ್ ಓವರ್ ಆಲ್ ಲುಕ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂದ ಪ್ರತಿಭಾ ದಯಾ ಕ್ಕುಕ್ಕಾಜೆ

0

ಅಖಿಲ ಭಾರತ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ​​ಮಂಗಳೂರು, ಆರ್‌ಸಿಒ ಪ್ರೊಫೆಷನಲ್, ಒಲಿವಿಯಾ ಮತ್ತು ಸಿವಿಪ್ರೊಫೆಷನಲ್‌ಗಳ ಸಹಯೋಗದಲ್ಲಿ ಬ್ರೈಡಲ್ ಮೇಕಪ್ ಸ್ಪರ್ಧೆಯನ್ನು ಆಯೋಜಿಸಿದೆ. ಬೆಂದೂರ್ ವೆಲ್ ಮಾಯಾಇಂಟರ್‌ನ್ಯಾಶನಲ್ ಹೋಟೆಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಗಳೂರು, ಕಾಸರಗೋಡು, ಉಡುಪಿ, ಮಡಿಕೇರಿ, ಕಾರವಾರದಿಂದ 45ಕ್ಕೂ ಹೆಚ್ಚು ಮೇಕಪ್ ಕಲಾವಿದರು ಭಾಗವಹಿಸಿದ್ದರು. ಬೆಸ್ಟ್ ಓವರ್ ಆಲ್ ಲುಕ್ ಪ್ರಶಸ್ತಿಯನ್ನು ದಿ ಬ್ಯೂಟಿ ಬ್ಲಾಗ್ ಮಾಲಕಿಪ್ರತಿಭಾ ದಯಾ ಕುಕ್ಕಾಜೆಯವರು ತಮ್ಮದಾಗಿಸಿಕೊಂಡರು. ಪ್ರತಿಭಾ ಅವರು ಹಿಂದೆ 2019 ಬ್ರೈಡಲ್ ಕಾಂಪಿಟೇಶನ್ ನಲ್ಲಿವಿನ್ನರ್ ಆಗಿ ಹೊರ ಹೊಮ್ಮಿದ್ದು, 2021 ಶ್ರೀ ಶಾರದಾ ಮಾತಾ ಫೊಟೋ ಕಂಟೆಸ್ಟ್ ಸ್ಪರ್ಧೆಯಲ್ಲಿ ಪ್ರತಿಭಾ ಅವರ ಶ್ರೀ ಶಾರದೆಯಮೇಕಪ್ ಗೆ ಬೆಸ್ಟ್ ಮೇಕಪ್ ಆರ್ಟಿಸ್ಟ್ ಬಹುಮಾನವು ಒಲಿದಿತ್ತು. ಸೌಂದರ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವಪ್ರತಿಭಾ ದಯಾಕುಕ್ಕಾಜೆಯವರು ಸೌಂದರ್ಯ ಪ್ರಿಯರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


Leave a Reply

Your email address will not be published. Required fields are marked *

You may have missed