ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ಈ ವರ್ಷವೂ ಮಕ್ಕಳಿಗಿಲ್ಲ ಉಚಿತ, ಶೂ, ಸಾಕ್ಸ್ ಭಾಗ್ಯ!

0

ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಅನುದಾನ ಬಿಡುಗಡೆಯಾಗಿ ಮೂರು ತಿಂಗಳಾದರೂ ಮಕ್ಕಳಿಗೆ ಉಚಿತ ಶೂ (Shoe), ಸಾಕ್ಸ್ (Socks) ಭಾಗ್ಯ ಇಲ್ಲ.

Sch

 

ಹೌದು, ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿ ಆರು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಇನ್ನೂ ವಿತರಣೆ ಮಾಡಿಲ್ಲ. ಈ ವರ್ಷ ಶಾಲಾರಂಭದಿಂದ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸುವಂತೆ ರಾಜ್ಯ ಸರ್ಕಾರ ಜುಲೈ 2 ನೇ ವಾರದಲ್ಲಿ 1 ರಿಂದ 10 ನೇ ತರಗತಿವರೆಗೆ 132 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಅನುದಾನ ಬಿಡುಗಡೆಯಾಗಿ ಮೂರು ತಿಂಗಳು ಕಳೆದರೂ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್ ಸಿಕ್ಕಿಲ್ಲ.

ಸರ್ಕಾರಿ ಶಾಲೆಗ ಸೇರುವ 1 ರಿಂದ 10ನೇ ತರಗತಿ ವರೆಗಿನ ಬಡ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಹಾಗೂ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡಲು ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಒಂದು ಜೊತೆ ಶೂ ಮತ್ತು 2 ಎರಡು ಜೊತೆ ಸಾಕ್ಸ್ ನೀಡುವ ಯೋಜನೆ 2016ರಲ್ಲಿ ಜಾರಿ ಮಾಡಲಾಗಿತ್ತು. 1-5ನೇ ತರಗತಿಗೆ 225 ರೂ. 6-8ನೇ ತರಗತಿಗೆ 250 ರೂ. ಮತ್ತು 9-10 ನೇ ತರಗತಿ ವಿದ್ಯಾರ್ಥಿಗಳಿಗೆ 275 ರೂ. ನಂತೆ ಶೂಗೆ ದರ ನಿಗದಿ ಮಾಡಲಾಗಿದೆ.

Source Dailyhunt


Leave a Reply

Your email address will not be published. Required fields are marked *